News
×

ನಮ್ಮ ಸೋಮಣ್ಣ


ಜನಸಾಮಾನ್ಯರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಎಲ್ಲ ವರ್ಗದ ಜನರ ಆಶೀರ್ವಾದವೇ ನನಗೆ ಸ್ಫೂರ್ತಿ.

- ಶ್ರೀ ವಿ. ಸೋಮಣ್ಣ



ನಮ್ಮ ಸೋಮಣ್ಣ

ಎಲೆಕ್ಷನ್ ಸ್ಪೆಷಲಿಸ್ಟ್!

ಚುನಾವಣೆ ಕಾಲದ ಯಶಸ್ವಿ ಸಂಘಟನಾಕಾರ...

ವಿ ಸೋಮಣ್ಣ ಅವರು ಈವರೆಗೆ ಹಲವಾರು ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಉಸ್ತುವಾರಿಯಾಗಿ ಮುನ್ನೆಲೆಯಲ್ಲಿ ನಿಂತು ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮುಖ್ಯವಾಗಿ ಬೆಂಗಳೂರು ಮಹಾನಗರದಲ್ಲಿ ಸೋಮಣ್ಣ ಅವರಿಗೆ ಅಪಾರ ಪ್ರಭಾವ ಮತ್ತು ಹಿಡಿತ ಇದೆ. ಬಿಬಿಎಂಪಿ ಚುನಾವಣೆಯಲ್ಲಂತೂ ಸೋಮಣ್ಣ ಅವರು ಪಕ್ಷದ ಪ್ರಬಲ ಶಕ್ತಿ.

ತುಮಕೂರು ಲೋಕಸಭೆ ಗೆಲುವು..

2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ನಾಯಕ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜ್ ಅವರು ಚಾರಿತ್ರಿಕ ಗೆಲುವು ಸಾಧಿಸುವಲ್ಲಿ ಸೋಮಣ್ಣ ಅವರ ರಾಜಕೀಯ ತಂತ್ರಗಾರಿಕೆ ಮತ್ತು ಪಕ್ಷ ಸಂಘಟನೆಯ ಕೊಡುಗೆ ಮಹತ್ವಪೂರ್ಣ.

ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ವಿಜಯ..

2019ರಲ್ಲಿ ನಡೆದ ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ಸಮರದಲ್ಲಿ ಸೋಮಣ್ಣ ಅವರು ಉಸ್ತುವಾರಿ ವಹಿಸಿದ್ದರು. ಕ್ಷೇತ್ರಾದ್ಯಂತ ವ್ಯಾಪಕ ಪ್ರಚಾರ ನಡೆಸಿದ್ದ ಸೋಮಣ್ಣ ಅವರು ವಿವಿಧ ಸಮುದಾಯಗಳ ಮುಖಂಡರು, ಧಾರ್ಮಿಕ ಪ್ರಮುಖರ ಜತೆ ಸಮನ್ವಯ ಸಾಧಿಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಉಮೇಶ್ ಜಾಧವ್ ಅವರು ಪ್ರಚಂಡ ಜಯ ದಾಖಲಿಸಿದರು.

ಬಸವಕಲ್ಯಾಣ ಉಪ ಚುನಾವಣೆ ಮೇಲುಗೈ..

ಈ ಚುನಾವಣೆ ಸಂದರ್ಭದಲ್ಲಿ ಉಸ್ತುವಾರಿಯ ಹೊಣೆ ಹೊತ್ತು ಕ್ಷೇತ್ರದ ಮೂಲೆಮೂಲೆಗಳಲ್ಲಿ ಸಂಚರಿಸಿ, ವಿವಿಧ ಸಂಘ ಸಂಸ್ಥೆಗಳು, ಸಮುದಾಯ ಸಂಘಟನೆಗಳು ಮತ್ತು ಸ್ಥಳೀಯ ಮುಖಂಡರ ಜತೆ ಸತತ ಸಂವಾದ ನಡೆಸಿ ಮತಗಳ ಧ್ರುವೀಕರಣದಲ್ಲಿ ಸೋಮಣ್ಣ ಅವರು ಮುಖ್ಯ ಪಾತ್ರ ವಹಿಸಿದರು. ಟಿಕೆಟ್ ಗೆ ತೀವ್ರ ಪೈಪೋಟಿ ಮತ್ತು ಬಂಡಾಯ ಅಭ್ಯರ್ಥಿಗಳ ಗೊಂದಲದ ಸವಾಲಿನ ನಡುವೆಯೂ ಪಕ್ಷದ ಅಭ್ಯರ್ಥಿ ಶರಣು ಸಲಗರ ವಿಜಯ ಸಾಧಿಸಿದರು.

ಇದಲ್ಲದೆ ಇತರ ಪ್ರಮುಖ ಚುನಾವಣೆಗಳ ವಿಜಯದಲ್ಲಿ ಶ್ರೀ ವಿ ಸೋಮಣ್ಣ ಅವರ ಶ್ರಮ ಮತ್ತು ಕೊಡುಗೆ ಗಮನಾರ್ಹ.

  • ದೇವದುರ್ಗ ಉಪ ಚುನಾವಣೆ: 2016 ಶ್ರೀ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಬಿಜೆಪಿಯ ಶ್ರೀ ಶಿವನಗೌಡ ನಾಯಕ ಅವರಿಗೆ ಗೆಲುವು
  • ಚನ್ನಪಟ್ಟಣ ಉಪ ಚುನಾವಣೆ: 2011 ಬಿಜೆಪಿಯ ಶ್ರೀ ಯೋಗೇಶ್ವರ್ ಅವರಿಗೆ ಜಯ
  • ಕಡೂರು ಉಪ ಚುನಾವಣೆ: 2010 ಬಿಜೆಪಿಯ ಶ್ರೀ ವೈ ಸಿ ವಿಶ್ವನಾಥ್ ಅವರಿಗೆ ಗೆಲುವು
  • ಕೊಪ್ಪಳ ಉಪ ಚುನಾವಣೆ: 2011 ಬಿಜೆಪಿಯ ಶ್ರೀ ಕೆ ಎಸ್ ಅಮರಪ್ಪ ಅವರಿಗೆ ವಿಜಯ
  • ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: 2009, 2014 ಮತ್ತು 2019 ಬಿಜೆಪಿಯ ಶ್ರೀ ಅನಂತ್ ಕುಮಾರ್ ಮತ್ತು ಶ್ರೀ ತೇಜಸ್ವಿ ಸೂರ್ಯ ಅವರಿಗೆ ಭರ್ಜರಿ ಜಯ.
  • ತುಮಕೂರು ಲೋಕಸಭಾ ಕ್ಷೇತ್ರ: 2009 ಬಿಜೆಪಿ ಅಭ್ಯರ್ಥಿಗೆ ಗೆಲುವು
  • ಬಿಬಿಎಂಪಿ ಚುನಾವಣೆ: 2015 ವಿಜಯನಗರ ಮತ್ತು ಗೋವಿಂದರಾಜ ನಗರ ಕ್ಷೇತ್ರದ 11 ವಾರ್ಡ್ ಗಳಲ್ಲಿ ಬಿಜೆಪಿಗೆ ಗೆಲುವು
  • ಬಿಬಿಎಂಪಿ ಚುನಾವಣೆ: 2010 ವಿಜಯನಗರ ಮತ್ತು ಗೋವಿಂದರಾಜ ನಗರ ಕ್ಷೇತ್ರಗಳ 16 ವಾರ್ಡ್ ಗಳಲ್ಲಿ ಜಯ
  • ಬಿಬಿಎಂಪಿ ಕಾವೇರಿಪುರ ಉಪ ಚುನಾವಣೆ: 2019 ಬಿಜೆಪಿಯ ಶ್ರೀಮತಿ ಪಲ್ಲವಿ ಚನ್ನಪ್ಪ ಅವರಿಗೆ ಜಯ
  • ಸಿಂದಗಿ ಉಪ ಚುನಾವಣೆ: 2021 ಬಿಜೆಪಿಯ ಶ್ರೀ ರಮೇಶ್ ಭೂಸನೂರ್ ಅವರಿಗೆ 30 ಸಾವಿರ ಮತಗಳ ಅಂತರದ ಭಾರಿ ಗೆಲುವು